Thursday, June 20, 2013

ಹುಳಿ ಅನ್ನ (ಉಪ್ಪು ಖಾರದ ಅನ್ನ)

ಹುಳಿ ಅನ್ನ ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ. ನಮ್ಮ ಮೈಸೂರು ಕಡೆ ಹಳ್ಳಿಗಳಲ್ಲಿ ಬೆಳಗಿನ ಉಪಹಾರಕೆ ಸಾಮಾನ್ಯವಾಗಿ ಮಾಡುವ ತಿಂಡಿ. ತುಂಬಾ ಸುಲಭವಾದ ಎಲ್ಲರ ನೆಚ್ಚಿನ  ರುಚಿಕರವಾದ ತಿಂಡಿ. ನಾನು ಇಲ್ಲಿ basic ವಿಧಾನ ಕೊಡುತ್ತಿದೇನೆ.





ಬೇಕಾಗುವ ಸಾಮಾಗ್ರಿಗಳು:
ಅನ್ನ - 2 ಕಪ್
ಹುಣಸೆಹಣ್ಣಿನ ರಸ  - 1ಕಪ್
ಹೆಚ್ಚಿದ ಈರುಳ್ಳಿ - 1
ಹೆಚ್ಚಿದ ಬೆಳ್ಳುಳ್ಳಿ - 1 ಎಸಳು
ಖಾರದ ಪುಡಿ - 1 ಸ್ಪೂನ್  
ಕಡಲೆಬೀಜ ಸ್ವಲ್ಪ
ಕರಿಬೇವು  ಸ್ವಲ್ಪ
ರುಚಿಗೆ ತಕ್ಕ ಉಪ್ಪು

ಒಗ್ಗರಣೆ : ಸಾಸಿವೆ, ಕಡಲೆಬೇಳೆ, ಜೀರಿಗೆ, ಮೆಂತ್ಯ, ಉದ್ದಿನಬೇಳೆ, ಒಣ ಮೆಣಸಿನಕಾಯಿ, ಎಣ್ಣೆ  (ಎಲ್ಲ ಸ್ವಲ್ಪ)
ಮಾಡುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಒಗ್ಗರಣೆ ಹಾಕಿ.
2. ಈಗ ಒಗ್ಗರಣೆಗೆ ಈರುಳ್ಳಿ, ಕರಿಬೇವು, ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ.
3. ಹುಣಸೆಹಣ್ಣಿನ ರಸ ಹಾಕಿ ಅದು ಅರ್ಧ ಆಗುವವರೆಗೂ ಕುದಿಸಿ.
4. ಈಗ ಕಾರದ ಪುಡಿ ರುಚಿಗೆ ಉಪ್ಪು ಹಾಕಿ ಮತ್ತೆ ಕುದಿಸಿ. ಕಡಲೆಬೀಜ ಸೇರಿಸಿ. ಹುಳಿ ಅನ್ನದ ಗೋಜು ರೆಡಿ. ಇದು ವಾರಗಟಲೆ ಇಡಬಹುದು.
5. ಗೊಜ್ಜಿಗೆ ಅನ್ನ ಕಲೆಸಿ ಹುಳಿ ಅನ್ನ ರೆಡಿ.


No comments: