ನಾನು ಬ್ರಿಟನ್ ಗೆ ಬಂದ ಹೊಸದರಲ್ಲಿ Jamie's 15 minute meals ಪ್ರೊಗ್ರಾಮ್ ಇಂದ inspired ಆದ receipe. ಟ್ರೈ ಮಾಡೋಣ ಅಂತ ಒಮ್ಮೆ ಮಾಡಿದೆ ಎಲ್ಲರಿಗು ಇಷ್ಟ ಆಯಿತು. ನನ್ನ 2.5ವರ್ಷದ ಪುಟ್ಟ ಪೋರನು ಇಷ್ಟ ಪಡುತ್ತಾನೆ, So ನಮ್ಮ ಬೆಳಗಿನ ತಿಂಡಿಗೆ ಒಂದು ಹೊಸ ರುಚಿ.
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ - 2ಕಪ್ಸ್
ತರಕಾರಿಗಳು ಸಣ್ಣಗೆ ಕತ್ತರಿಸಿದ ಬೀನ್ಸ್, ಕ್ಯಾರಟ್, ಕ್ಯಾಪ್ಸಿಕಂ, ಹಸಿ ಬಟಾಣಿ
ಹಸಿ ಮೆಣಸಿನಕಾಯಿ - 2
ಹೆಚ್ಚಿದ ಈರುಳ್ಳಿ - 1
ಶುಂಟಿ ಬೆಳ್ಳುಳ್ಳಿ ಪೇಸ್ಟ್/ತುರಿದ - 1ಸ್ಪೂನ್
ಕರಿಬೇವು ಸ್ವಲ್ಪ
ರುಚಿಗೆ ತಕ್ಕ ಉಪ್ಪು
ಒಗ್ಗರಣೆ : ಸಾಸಿವೆ, ಕಡಲೆಬೇಳೆ, ಜೀರಿಗೆ, ಮೆಂತ್ಯ,ಉದ್ದಿನಬೇಳೆ,ಎಣ್ಣೆ (ಎಲ್ಲ ಸ್ವಲ್ಪ)
ಮಾಡುವ ವಿಧಾನ:
1. ಮೊದಲು ಅನ್ನ ಮಾಡಿಕೊಳ್ಳಿ.
2. ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಒಗ್ಗರಣೆ ಹಾಕಿ.
3. ಈಗ ಒಗ್ಗರಣೆಗೆ ಈರುಳ್ಳಿ, ಕರಿಬೇವು, ಹಸಿ ಮೆಣಸಿನಕಾಯಿ,ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿ ನಂತರ ಉಪ್ಪು ,ತರಕಾರಿಗಳನ್ನು ಹಾಕಿ ಬೇಯಿಸಿ.
4. ತರಕಾರಿ ಬೆಂದ ನಂತರ ಅನ್ನ ಹಾಕಿ ಕಲಸಿ.
Vegetable ಚಿತ್ರಾನ್ನ ಸವಿಯಲು ಸಿದ್ದ.